ಹೃದಯ ಕಾಯಿಲೆ ತಡೆಗೆ ಮುಂಜಾಗ್ರತೆ ಅತ್ಯಗತ್ಯಮನುಷ್ಯನ ಜೀವನ ಯಾಂತ್ರಿಕತೆಯತ್ತ ಸಾಗಿದೆ. ಹೀಗಾಗಿ ಇಂದು ಅನೇಕ ರೀತಿಯ ಕಾಯಿಲೆಗಳಿಗೆ ಒಳಗಾಗುತ್ತಿದ್ದೇವೆ. ಆದ್ದರಿಂದ ಸಣ್ಣವರು, ದೊಡ್ಡವರು ಎನ್ನದೇ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮವಾಗಿ ಹೃದಯ ತಪಾಸಣೆಗೆ ಒಳಪಡಬೇಕಾದ ಅಗತ್ಯವಿದೆ ಎಂದು ವಿಜಯಪುರದ ಆರೋಗ್ಯ ಧಾಮದ ಆಸ್ಪತ್ರೆಗೆ ಮುಖ್ಯಸ್ಥರು ಹಾಗೂ ಖ್ಯಾತ ಹೃದಯ ರೋಗ ತಜ್ಞರಾದ ಡಾ.ಶಂಕರಗೌಡ ಪಾಟೀಲ(ಯಾಳಗಿ) ಹೇಳಿದರು.