ವೀರಶೈವ, ಲಿಂಗಾಯತ ಒಂದಾಗಬೇಕೆಂದು ಜನ ಬಯಸ್ತಿದೆಕನ್ನಡಪ್ರಭ ವಾರ್ತೆ ವಿಜಯಪುರ ವೀರಶೈವ ಮತ್ತು ಲಿಂಗಾಯತ ಒಂದಾಗಬೇಕು ಎಂಬುದು ಒಂದು ನಿಲುವು, ಬೇರೆ ಬೇರೆಯಾಗಬೇಕು ಎಂಬುದು ಮತ್ತೊಂದು ನಿಲುವಿದೆ. ಆದರೆ, ಬಹುಪಾಲು ಜನರು ವೀರಶೈವ- ಲಿಂಗಾಯತ ಒಂದಾಗಬೇಕು ಎಂದು ಬಯಸುತ್ತಾರೆ. ಕೆಲವರು ಶಿಕ್ಷಣವಂತರು, ನಗರದ ಕೆಲವರು ಪ್ರತ್ಯೇಕವಾಗಿ ಹೋಗಬೇಕು ಎಂದು ಹೇಳುತ್ತಾರೆ ಬೆಂಗಳೂರಿನ ಗೂಳೂರಿನಲ್ಲಿನ ನಿಡುಮಾಮಿಡಿ ಸಂಸ್ಥಾನ ಮಠದ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.