ಪತ್ರಕರ್ತರು ಒಗ್ಗಟ್ಟಾದರೆ ಕ್ಷೇತ್ರದ ಸುಧಾರಣೆಕನ್ನಡಪ್ರಭ ವಾರ್ತೆ ವಿಜಯಪುರ ಪತ್ರಕರ್ತರು ಜವಾಬ್ಧಾರಿಯುತವಾಗಿ ಕೆಲಸ ಮಾಡಬೇಕು. ಕೆಲ ಪತ್ರಕರ್ತರಿಂದ ಇಡೀ ಪತ್ರಕರ್ತರ ಸಮೂಹಕ್ಕೆ ಕಪ್ಪು ಚುಕ್ಕೆ ತಗಲುತ್ತಿದೆ. ಇದನ್ನು ನಿವಾರಿಸಲು ಪತ್ರಕರ್ತರ ಸಂಘಟನೆಗಳು ಕೆಲಸ ಮಾಡಬೇಕು ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಹೇಳಿದ್ದಾರೆ. ಅವರು ಹೇಳಿದ್ದರ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ಹಿರಿಯ ಪತ್ರಕರ್ತ ರಫೀ ಭಂಡಾರಿ ಹೇಳಿದರು.