ಒಳಚರಂಡಿ ಅವ್ಯವಸ್ಥೆ: ದುರ್ನಾತಕ್ಕೆ ಬೇಸತ್ತ ಜನತೆಸಾರ್ವಜನಿಕರು ಪುರಸಭೆ ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಕರೆ ಮಾಡಿದರೂ ಒಬ್ಬರು ಮತ್ತೊಬ್ಬ ಮೇಲೆ ಹಾಕಿ ನುಣುಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಹೊರತು ಸಮಸ್ಯೆ ಪರಿಹರಿಸುವ ಧಾವಂತದಲ್ಲಿ ಇದ್ದಂತೆ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುವಂತಾಗಿದೆ. ಪುರಸಭೆಯವರು ಯುಜಿಸಿಯನ್ನು ಪುರಸಭೆಗೆ ಹಸ್ತಾಂತರ ಮಾಡಿಲ್ಲ ಎಂದರೆ, ಪಟ್ಟಣದ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಒಳಚರಂಡಿ ಕಾಮಗಾರಿ ಮುಕ್ತಾಯಗೊಂಡು 4-5 ವರ್ಷವಾಗಿದೆ. ಈಗ ನಮ್ಮದು ಯಾವುದೇ ಜವಾಬ್ದಾರಿ ಇಲ್ಲ. ಪುರಸಭೆಯವರೇ ನೋಡಿಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ಈ ವಿಷಯವಾಗಿ ಯಾರನ್ನು ಸಂಪರ್ಕಿಸಬೇಕು ಎಂಬುದು ಸಾರ್ವಜನಿಕರ ಪೀಕಲಾಟವಾಗಿದೆ.