ಮಾನು ಸ್ವಾಭಿಮಾನಿ ಮತ್ತು ವಸ್ತುನಿಷ್ಠ ಬರಹಗಾರ; ಅಕ್ಕಿಪ್ರತಿಭಾವಂತ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಹಿರಿಯ ಪತ್ರಕರ್ತ ಮಾನು ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರ ಅಗಲಿಕೆಯಿಂದ ಮಾಧ್ಯಮ, ಸಾಹಿತ್ಯ ಕ್ಷೇತ್ರಕ್ಕೆ ಭರಿಸಲಾಗದ ನಷ್ಟ ಎಂದು ಹಿರಿಯ ಸಾಹಿತಿ, ಸಂಶೋಧಕ ಡಿ.ಎನ್.ಅಕ್ಕಿ ಕಂಬನಿ ಮಿಡಿದರು. ದಿ. ವೆಂಕಟೇಶ ಮಾನು ಅವರ ಪಾರ್ಥಿವ ಶರೀರದ ದರ್ಶನ ನಂತರ ಅವರ ಗೆಳೆಯರ ಬಳಗದಿಂದ ನಡೆದ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ನುಡಿ ನಮನಗಳನ್ನು ಸಲ್ಲಿಸಿದರು.