ನೈತಿಕ ಸಮಿತಿ ವಿಚಾರಣೆಗೆ 31ಕ್ಕೆ ಬದಲು ನ.5 ನಂತರ ಬರುವೆ: ಸಂಸದೆ ಮಹುವಾಲೋಕಸಭೆಯಲ್ಲಿ ಪ್ರಶ್ನೆಗಾಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಅ.31ರಂದು ನೈತಿಕ ಸಮಿತಿ ಎದುರು ಹಾಜರಾಗಬೇಕು ಎಂದು ನೀಡಿದ್ದ ಸಮನ್ಸ್ಗೆ ಪ್ರತಿಕ್ರಿಯಿಸಿರುವ ಸಂಸದೆ ಮಹುವಾ ಮೊಯಿತ್ರಾ, ‘31ರಂದು ಬರಲು ಆಗದು. ನ.5ರ ಬಳಿಕ ವಿಚಾರಣೆಗೆ ಬರುತ್ತೇನೆ’ ಎಂದು ತಿಳಿಸಿದ್ದಾರೆ.