ಬೈಕ್ ಗಳ ಮುಖಾಮುಖಿ ಡಿಕ್ಕಿ: ಗ್ರಾಪಂ ಮಾಜಿ ಸದಸ್ಯ ಸಾವುHead-on collision of bikes: ಹೀರೊ ಪ್ಯಾಷನ್ ಬೈಕ್ ಹಾಗೂ ಹೋಂಡಾ ಆಕ್ಟೀವ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಗ್ರಾಪಂ ಮಾಜಿ ಸದಸ್ಯ ಮೃತಪಟ್ಟ ಘಟನೆ ತಾಲೂಕಿನ ಶಿವಪುರ ಗ್ರಾಮದ ಜೆಎಸ್ ಎಸ್ ಶಾಲೆಯ ಎದುರು ನಡೆದಿದೆ. ತಾಲೂಕಿನ ಶಿವಪುರ ಗ್ರಾಮದ ನಿವಾಸಿ,ಗ್ರಾಪಂ ಮಾಜಿ ಸದಸ್ಯ ಪುಟ್ಟಲಿಂಗಯ್ಯ(50) ಸಾವನ್ನಪ್ಪಿದ್ದು, ಬೈಕ್ ಸವಾರ ನಾಗಮಲ್ಲೇಗೌಡನ ಕಾಲಿಗೆ ಪೆಟ್ಟು ಬಿದ್ದಿದೆ. ಅಪಘಾತ ಸ್ಥಳಕ್ಕೆ ಸಬ್ ಇನ್ಸ್ ಪೆಕ್ಟರ್ ಸಾಹೇಬ ಗೌಡ ಹಾಗೂ ಸಿಬ್ಬಂದಿ ಆಗಮಿಸಿದ ನಂತರ ಮೃತ ಪುಟ್ಟಲಿಂಗಯ್ಯ ಶವವನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.