ರಾಜಕೀಯವಾಗಿ ಅಸ್ಥಿರವಾಗಿರುವ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ಮುಂದುವರೆದಿವೆ. ಹಳೆ ಢಾಕಾ ಪ್ರದೇಶದಲ್ಲಿ, ಮಿಟ್ಫೋರ್ಡ್ ಆಸ್ಪತ್ರೆ ಎದುರು ಗುಜರಿ ವ್ಯಾಪಾರಿಯಾದ ಲಾಲ್ ಚಂದ್ ಸೋಹಾಗ್ ಎಂಬುವವರ ಮೇಲೆ ಕಾಂಕ್ರೀಟ್ ಸ್ಲ್ಯಾಬ್ಗಳನ್ನು ಬಳಸಿ ದಾಳಿ ಮಾಡಿ, ಹತ್ಯೆಗೈಯ್ಯಲಾಗಿದೆ.
ದೇಶದ ಭೀಕರ ವಿಮಾನ ದುರಂತಗಳಲ್ಲಿ ಒಂದಾದ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯು ಶುಕ್ರವಾರ ರಾತ್ರಿ ಬಿಡುಗಡೆಯಾಗಿದೆ.
ಟಿಬೆಟ್ ಹೋರಾಟ ಬೆಂಬಲಿಸುವ ಸಲುವಾಗಿ ಸರ್ವಪಕ್ಷದ ಸುಮಾರು 80 ಸಂಸದರು ಟಿಬೆಟಿಯನ್ ಬೌದ್ಧ ಧರ್ಮಗುರು ದಲೈಲಾಮಾಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕೃತಕ ಬುದ್ಧಿಮತ್ತೆಯು ಊಹೆಗೂ ಮೀರಿ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ಸೊಳ್ಳೆಗಳ ಮೇಲೆ ಕಣ್ಣಿಡಲು ಮತ್ತು ಅವುಗಳನ್ನು ನಿಯಂತ್ರಿಸಲು ಎಐ ಬಳಸಲು ಆಂಧ್ರಪ್ರದೇಶ ಮುಂದಾಗಿದೆ.
ಕೊಲ್ಲಿ ದೇಶ ಯುಎಇ ತನ್ನ ಗೋಲ್ಡನ್ ವೀಸಾ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಹೀಗಾಗಿ ಕೇವಲ 23 ಲಕ್ಷ ರು. ನೀಡಿ ಅರ್ಹ ಭಾರತೀಯರು ಸುಲಭವಾಗಿ ಯುಎಇ ದೇಶದ ಪೌರತ್ವ ಪಡೆಯಬಹುದಾಗಿದೆ.
ಪಾಕ್ನ ಪರಮಾಣು ನೆಲೆಗಳ ಕೀಲಿ ಕೈ ಅಮೆರಿಕದ ಬಳಿ ಇದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎದ ಮಾಜಿ ಹಿರಿಯ ಅಧಿಕಾರಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ.