ಮೊಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಭಾರತ ವಿರೋಧಿ ಹೆಜ್ಜೆಗಳನ್ನಿಡುತ್ತಿರುವ ನಡುವೆಯೇ, ದೇಶದ್ರೋಹದ ಆರೋಪದಡಿ ನ.25ರಂದು ಬಂಧಿತರಾಗಿದ್ದ ಇಸ್ಕಾನ್ ಸನ್ಯಾಸಿ ಚಿನ್ಮಯ್ ದಾಸ್ ಅವರಿಗೆ ಜಾಮೀನು ನೀಡಲು ಅಲ್ಲಿನ ನ್ಯಾಯಾಲಯ ನಿರಾಕರಿಸಿದೆ.
ಭಾರತದ ಯೋಗ ಪರಂಪರೆಗೆ ಈ ಹಿಂದೆ ಮನ್ನಣೆ ನೀಡಿದ್ದ ವಿಶ್ವಸಂಸ್ಥೆ ಇದೀಗ ಭಾರತದ ಧ್ಯಾನಕ್ಕೂ ಮನ್ನಣೆ ನೀಡಿದೆ. ಕನ್ನಡಿಗ ಶ್ರೀ ಶ್ರೀ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಮೊದಲ ವಿಶ್ವ ಧ್ಯಾನ ದಿನ ಘೋಷಣೆ ಮಾಡಲಾಗಿದ್ದು, ಶನಿವಾರ ವಿಶ್ವಾದ್ಯಂತ ಆಚರಿಸಲಾಗಿದೆ.
ಓಪನ್ ಎಐ ನ ಆರ್ಟಿಫಿಶಿಯಲ್ ಇಂಟಲಿಜೆನ್ಸ್ನ ಸಂಶೋಧಕರಾಗಿ ಕೆಲಸ ಮಾಡಿದ್ದ ಹಾಗೂ ಆ ಕಂಪನಿ ವಿರುದ್ಧವೇ ದನಿ ಎತ್ತಿದ್ದ 26 ವರ್ಷದ ಭಾರತೀಯ ಮೂಲದ ಸುಚಿರ್ ಬಾಲಾಜಿ ಶವ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ