ಸಣ್ಣ ದ್ವೀಪಕ್ಕಾಗಿ ಅಮೆರಿಕ ನನ್ನ ಕೆಳಗಿಳಿಸ್ತು: ಬಾಂಗ್ಲಾದೇಶದ ನಿರ್ಗಮಿತ ಪ್ರಧಾನಿ ಶೇಖ್ ಹಸೀನಾಬಾಂಗ್ಲಾದೇಶದ ನಿರ್ಗಮಿತ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೂ ಮುನ್ನವೇ ಮಾಡಬೇಕು ಎಂದಿದ್ದ ಭಾಷಣ ಈಗ ಬಹಿರಂಗಗೊಂಡಿದ್ದು, ‘ಬಾಂಗ್ಲಾದೇಶದಲ್ಲಿ ಸರ್ಕಾರ ಬದಲಾವಣೆಯಲ್ಲಿ ಅಮೆರಿಕದ ಕೈವಾಡವಿದೆ. ದೇಶದ ಗಡಿಯಲ್ಲಿ ನೆಲೆಯೂರಲು ಅಮೆರಿಕ ಪ್ರಯತ್ನಿಸುತ್ತಿದೆ’ ಎಂಬ ಗಂಭೀರ ಆರೋಪ ಮಾಡಿದ್ದಾರೆ.