ಪೌಷ್ಟಿಕ ಆಹಾರ ಸೇವನೆ ಪ್ರತಿಯೊಬ್ಬರ ಹಕ್ಕು

Sep 19 2025, 01:00 AM IST
ಉತ್ತಮ ಮತ್ತು ಗುಣಮಟ್ಟದ ಆಹಾರ ಸೇವನೆ ಪ್ರತಿಯೊಬ್ಬರ ಹಕ್ಕಾಗಿದ್ದು, ಆರೋಗ್ಯಪೂರ್ಣ ಜೀವನ ಸಾಗಿಸಲು ಪೌಷ್ಟಿಕ ಆಹಾರದ ಅರಿವು ಅಗತ್ಯವಾಗಿದೆ ಎಂದು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಕಿರಣ್ ಕುಮಾರ್ ಡಿ. ವಡಿಗೇರಿ ಹೇಳಿದರು. ಆರೋಗ್ಯಪೂರ್ಣ ಜೀವನ ಶೈಲಿಗೆ ಪೌಷ್ಟಿಕ ಆಹಾರ ಒಂದು ಪ್ರಮುಖ ಹಕ್ಕು. ಅಪೌಷ್ಟಿಕತೆ ಕೇವಲ ಆಹಾರದ ಕೊರತೆಯಿಂದ ಮಾತ್ರವಲ್ಲ, ಅಪ್ರಾಪ್ತ ವಯಸ್ಸಿನ ವಿವಾಹದಿಂದಲೂ ಬರುತ್ತದೆ. 18 ವರ್ಷ ತುಂಬುವ ಮುನ್ನ ಹೆಣ್ಣುಮಕ್ಕಳನ್ನು ವಿವಾಹ ಮಾಡುವುದು ಕಾನೂನಾತ್ಮಕ ಅಪರಾಧವಾಗಿದ್ದು, ಅದರಿಂದ ದೈಹಿಕ–ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ ಎಂದು ತಿಳಿಸಿದರು.

ಆರೋಗ್ಯಯುತ ಸಮಾಜಕ್ಕೆ ಉತ್ತಮ ಆಹಾರ ಪದ್ಧತಿ ಅವಶ್ಯ

Sep 12 2025, 12:06 AM IST
ಮಕ್ಕಳ ಭವಿಷ್ಯವು ಅವರ ಆರೋಗ್ಯದ ಮೇಲೆ ಆಧಾರಿತವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪೋಷಕರು ಪೌಷ್ಠಿಕ ಆಹಾರ ಸೇವನೆಗಿಂತ ಜಂಕ್‌ಫುಡ್‌ಗೆ ಆದ್ಯತೆ ನೀಡುತ್ತಿದ್ದಾರೆ. ಇವು ತಾತ್ಕಾಲಿಕ ತೃಪ್ತಿಯನ್ನು ನೀಡಿದರೂ ದೀರ್ಘಕಾಲದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ತ್ವರಿತ ಆಹಾರ (ಫಾಸ್ಟ್ ಫುಡ್) ಸೇವನೆಯಿಂದ ಪೌಷ್ಟಿಕಾಂಶದ ಕೊರತೆ ಹೆಚ್ಚುತ್ತಿದ್ದು, ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಾಲು, ಮೊಸರು, ತಾಜಾ ಹಣ್ಣು, ಹಸಿರು ತರಕಾರಿಗಳು, ಧಾನ್ಯಗಳು ಹಾಗೂ ನೈಸರ್ಗಿಕ ಆಹಾರ ಪದಾರ್ಥಗಳಲ್ಲಿ ಮಕ್ಕಳಿಗೆ ಬೇಕಾಗಿರುವ ವಿಟಮಿನ್‌ಗಳು, ಖನಿಜಗಳು ಮತ್ತು ಪ್ರೋಟೀನುಗಳು ದೊರೆಯುತ್ತವೆ. ಪೌಷ್ಠಿಕ ಆಹಾರ ಸೇವನೆ ಮೂಲಕ ಆರೋಗ್ಯವಂತರಾಗಿ ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಿ ಪೋಷಣೆ ಮಾಡಬೇಕು ಎಂದರು.