ಸಂಸ್ಕರಿಸಿದ ಆಹಾರ ಬೆಳೆಯುವ ಮಕ್ಕಳಿಗೆ ಮಾರಕ
Oct 09 2025, 02:00 AM ISTಮಕ್ಕಳು ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂಬುದನ್ನು ತಂದೆತಾಯಿ ಅರಿಯಬೇಕಿದೆ. ತರಕಾರಿ, ಸೊಪ್ಪು, ಕಾಳು, ಹಣ್ಣು, ಹಾಲು, ಮೊಸರು, ತುಪ್ಪ ಸೇವಿಸಬೇಕು ಹಾಗೂ ಕಡಿಮೆ ಪೌಷ್ಠಿಕಾಂಶವುಳ್ಳ ತಿನಿಸುಗಳು ಆರೋಗ್ಯಕ್ಕೆ ಮಾರಕ ಎಂದು ತಿಳಿಸಬೇಕಿದೆ. ಇದರ ಜೊತೆಗೆ ದೈಹಿಕ ಕಸರತ್ತು ಮಾಡದೇ ಇರುವುದರಿಂದಲೂ ಸಮಸ್ಯೆ ಉಂಟಾಗಿದೆ. ಮಕ್ಕಳಲ್ಲಿ ಮೊಬೈಲ್ ಬಳಕೆ ಕಡಿತ ಗೊಳಿಸಿ, ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗೆ ಪ್ರೇರೆಪಿಸುವುದು ಬಹು ಮುಖ್ಯವಾಗಿದೆ.