ಲಿಂಗಾಪುರ ಅಂಗನವಾಡಿಯಲ್ಲಿ ಕಳ್ಳತನ
Oct 16 2025, 02:00 AM ISTಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಅಂಗನವಾಡಿ ಕೇಂದ್ರದ ಟಿ.ವಿ, ಗ್ಯಾಸ್ ಸಿಲಿಂಡರ್ ಮತ್ತು ಇನ್ನಿತರ ಹಲವಾರು ವಸ್ತುಗಳನ್ನು ಹಾಗೂ ಪಕ್ಕದ ಸರ್ಕಾರಿ ಶಾಲೆಯ ಅಡುಗೆ ಮನೆಯಲ್ಲಿ ಇದ್ದಂತಹ ಗ್ಯಾಸ್ ಸಿಲಿಂಡರ್, ದಿನಸಿ ಪದಾರ್ಥ ಸೇರಿದಂತೆ ಇನ್ನಿತರೆ ವಸ್ತುಗಳನ್ನು ದೋಚಿದ್ದಾರೆ. ಇದಲ್ಲದೆ ಶಾಲೆಯ ಬೀಗ ಒಡೆದು ಅಲ್ಲಿಯೂ ಹುಡುಗಾಟ ನಡೆಸಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.