ಗಲೀಜು ನೀರು ಬಳಸಿ ಐಸ್ ಕ್ಯಾಂಡಿ ತಯಾರಿ: ಫ್ಯಾಕ್ಟರಿಗೆ ಬೀಗ
Mar 26 2025, 01:33 AM ISTಕಲುಷಿತ ನೀರು, ಹಾನಿಕಾರಕ ರಾಸಾಯನಿಕ ಬಣ್ಣ ಬಳಸಿದ್ದಲ್ಲದೆ, ರಾಸಾಯನಿಕ ಚಾಕಲೇಟ್ ಫ್ಲೇವರ್ಗಳನ್ನು ಬಳಕೆ ಮಾಡಿ ಐಸ್ ಕ್ಯಾಂಡಿಯನ್ನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಿರಣಗಿ ಗ್ರಾಮದಲ್ಲಿ ತಯಾರಿಸುತ್ತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ಅರಿತ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ಮಂಗಳವಾರ ಐಸ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಿ, ಐಸ್ ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ.