ಮೆಚ್ಚುಗೆಗೆ ಪಾತ್ರರಾದ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು
Oct 13 2025, 02:00 AM ISTಭಕ್ತರ ಸುಗಮ ದರ್ಶನಕ್ಕಾಗಿ ಮಕ್ಕಳ ಸೇವೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತಿದ್ದು, ಅವರ ನಿಷ್ಠೆ ಮತ್ತು ಶ್ರದ್ಧೆ ಎಲ್ಲರ ಮನ ಗೆದ್ದಿದೆ. ಜಾತ್ರೆಗೆ ಆಗಮಿಸಿರುವ ಭಕ್ತರು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸೇವಾ ಮನೋಭಾವವನ್ನು ಶ್ಲಾಘಿಸಿ “ಮಕ್ಕಳ ಈ ರೀತಿಯ ಸೇವೆ ಹಾಸನಾಂಬೆಯ ಆಶೀರ್ವಾದ ಪಡೆದಂತಿದೆ” ಎಂದು ಪ್ರಶಂಸಿಸಿದ್ದಾರೆ. ಭಕ್ತರ ಅಗತ್ಯ ಕ್ಷಣದಲ್ಲೇ ನೆರವಿಗೆ ಧಾವಿಸುವ ಈ ವಿದ್ಯಾರ್ಥಿಗಳ ಸೇವಾ ಮನೋಭಾವ ಜಾತ್ರೆಯ ಶ್ರೇಯಸ್ಸಿಗೆ ಕಾರಣವಾಗಿದ್ದು, ದೇವಾಲಯದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತದಿಂದಲೂ ಅವರಿಗೆ ಮೆಚ್ಚುಗೆ ವ್ಯಕ್ತವಾಗಿದೆ.