ಮೈಕ್ರೋ ಫೈನಾನ್ಸ್ ಹಾವಳಿ: ನೇಣಿಗೆ ಶರಣಾದ ವೃದ್ಧ ರೈತ
Feb 04 2025, 12:34 AM ISTಮೃತ ನರಸಿಂಹಯ್ಯ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ತಿಂಗಳಿಗೆ 15 ಸಾವಿರ ರು. ಸಾಲದ ಕಂತುಗಳನ್ನು ಕಟ್ಟುತ್ತಿದ್ದು, ಹಗಲು- ರಾತ್ರಿ ಎನ್ನದೇ ಫೈನಾನ್ಸ್ ನವರು ಮನೆ ಬಳಿ ಬಂದು ಹಣಕ್ಕಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ. ಮೃತ ನರಸಿಂಹಯ್ಯ ಒಟ್ಟು 3.5 ಲಕ್ಷ ರು. ಸಾಲ ಮಾಡಿಕೊಂಡಿದ್ದು, ಧರ್ಮಸ್ಥಳ ಸಂಘ, ಆಶೀರ್ವಾದ, ಗ್ರಾಮೀಣ ಕೂಟ, ಎಲ್ಎನ್ ಟಿ, ಸ್ಪಂದನ, ಸಮಸ್ತ, ನವ ಚೈತನ್ಯ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ.