ರಾಜ್ಯ ಸರ್ಕಾರ ಯಾವುದೇ ಬಿಪಿಎಲ್ ಕಾರ್ಡ್ ರದ್ದು ಮಾಡಲ್ಲ. ಆದರೆ, ಅವರು ಅನರ್ಹ ಆಗಿದ್ದರೆ ಎಪಿಎಲ್ ಕಾರ್ಡ್ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಅಕ್ಕಿ ಬದಲಾಗಿ ಬೇರೆ ಬೇರೆ ಧಾನ್ಯ ಕೊಡಲು ಕರ್ನಾಟಕ ಸರ್ಕಾರ ತೀರ್ಮಾನ ಮಾಡಿದೆ.
ಜಿಲ್ಲೆಯ ಗುರುಮಠಕಲ್ನ ರೈಸ್ ಮಿಲ್ ಗಳಲ್ಲಿ ಪತ್ತೆಯಾದ ಅನ್ನಭಾಗ್ಯ ಅಕ್ಕಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ವೇಳೆ ಸಿಕ್ಕ ಡೈರಿಯೊಂದರಲ್ಲಿನ ಬರೆದಿಟ್ಟಿರುವ ಅಂಶಗಳು ಲಂಚಾವತಾರದ ರಹಸ್ಯಗಳನ್ನು ಬಯಲಾಗಿಸಲಿವೆ.