ಜಿಲ್ಲಾಸ್ಪತ್ರೆ ಮೇಲ್ಚಾವಣಿ ಕುಸಿತ; ರೋಗಿ ಪಾರು
Mar 14 2024, 02:00 AM ISTಕಳೆದ ರಾತ್ರಿ ಜಿಲ್ಲಾಸ್ಪತ್ರೆಯ ವಾರ್ಡ್ ನಂಬರ್ 71-72ರಲ್ಲಿ ಒಳ ರೋಗಿಗಳು ಮಲಗಿದ್ದ ವೇಳೆ ಮೇಲ್ಚಾವಣಿಯಲ್ಲಿ ಏನೋ ಸದ್ದು ಕೇಳಿ ಜಾಗೃತಗೊಂಡ ಒಳ ರೋಗಿಯು ಬೀಳುವುದು ಗಮನಿಸಿ, ಅಕ್ಕಪಕ್ಕದ ಬೆಡ್ ನವರಿಗೆ ಎಚ್ಚರಿಸಿ, ಸುರಕ್ಷಿತ ಸ್ಥಳಕ್ಕೆ ಓಡಿದ್ದಾರೆ. ನೋಡ ನೋಡುತ್ತಿದ್ದಂತೆ ಕೊಠಡಿ ಮೇಲ್ಚಾವಣಿ ಪ್ಲಾಸ್ಟರ್ನ ಸುಮಾರು ಭಾಗವು ಬೆಡ್ ಮೇಲೆ ಬಿದ್ದಿದೆ. ಒಳ ರೋಗಿ ಒಂದು ಕ್ಷಣ ತಡ ಮಾಡಿದ್ದರೂ ತಲೆ ಅಥವಾ ದೇಹದ ಮೇಲೆ ಬಿದ್ದು, ದೊಡ್ಡ ಮಟ್ಟದ ಅಪಾಯವಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.