ಅಮಿತ್ ಶಾ ಹೇಳಿಕೆ ಪ್ರಜಾಪ್ರಭುತ್ವಕ್ಕೆ ಮಾಡಿರುವ ಅಪಮಾನ: ಮಂಜುನಾಥ್
Dec 26 2024, 01:02 AM ISTಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾವುದೇ ಸರ್ಕಾರವಾಗಿರಲಿ, ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವವರ ನಡೆ ಮತ್ತು ನುಡಿ ಜವಾಬ್ದಾರಿಯುತವಾಗಿರಬೇಕು. ಏಕೆಂದರೆ ಅವರ ಮಾತು ಇಡೀ ದೇಶ ಹಾಗೂ ವ್ಯವಸ್ಥೆಯ ಮಾತಾಗಿರುತ್ತದೆ. ಅಮಿತ್ ಶಾ ಅವರು ದೇಶದ ಗೃಹಮಂತ್ರಿಗಳಾಗಿರುವವರು. ಅವರ ಮಾತನ್ನು ಇಡೀ ವಿಶ್ವವೇ ಆಲಿಸುತ್ತದೆ. ಅವರು ಅತ್ಯಂತ ಬೇಜವಾಬ್ದಾರಿಯುತವಾಗಿ ಮಾತನಾಡಿರುವುದರಿಂದ ಕ.ದ.ಸಂ.ಸಮಿತಿ ಶಿಡ್ಲಘಟ್ಟ ತಾಲೂಕು ಶಾಖೆ ವತಿಯಿಂದ ತೀವ್ರವಾಗಿ ಖಂಡಿಸುತ್ತಿದ್ದೇವೆ.