ಶಿಸ್ತಿನ ಜೀವನ ಶೈಲಿಯಿಂದ ಉತ್ತಮ ಆರೋಗ್ಯ: ಡಾ. ಸೀನಪ್ಪ
Jan 07 2024, 01:30 AM ISTಜ್ಞಾನಕಾವೇರಿ ಆವರಣ ಚಿಕ್ಕಅಳುವಾರ ಇಲ್ಲಿನ ಮಾನವಿಕ ಸಂಕೀರ್ಣದ ಕಾವೇರಿ ಸಭಾಂಗಣದಲ್ಲಿ ಕೊಡಗು ವಿಶ್ವವಿದ್ಯಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರಂಗಾಲ ವತಿಯಿಂದ ‘ಉಚಿತ ಆರೋಗ್ಯ ತಪಾಸಣೆ ಹಾಗೂ ಆಯುಷ್ಮಾನ್ ಕಾರ್ಡ್’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕುಲಸಚಿವ ಡಾ. ಸೀನಪ್ಪ ಆರೋಗ್ಯ, ಜೀವನಶೈಲಿ ಬಗ್ಗೆ ಉಪನ್ಯಾಸ ನೀಡಿದರು.