ವಕೀಲ ದೇವರಾಜೇಗೌಡ ವಿರುದ್ಧ ಕಾಂಗ್ರೆಸ್ ಮುಖಂಡರ ಆಕ್ರೋಶ
Nov 10 2024, 01:34 AM ISTಹಾಸನಾಂಬ ಉತ್ಸವ ಯಶಸ್ವಿಯಾಗಿದೆ ಎಂದು ನಾವು ಸ್ವಾಗತ ಮಾಡಬೇಕೇ ಹೊರೆತು ಈ ಚಿಲ್ಲರೆ ಕಾಸಿನ ದೇವರಾಜೇಗೌಡ ಮಾಡುತ್ತಿರುವ ಈ ಆರೋಪ ಸುಳ್ಳು ಆರೋಪ ಎಂದು ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ್ ಹೇಳಿದರು. ಇವರು ರಾಜಕೀಯಪ್ರೇರಿತವಾಗಿ ಆರೋಪ ಮಾಡುತ್ತಿದ್ದಾರೆ. ಇವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದುದ್ದು. ಇನ್ನೊಂದು ಮಂತ್ರಿಗಳಿಗೆ ಕಪ್ಪು ಮಸಿ ಬಳಿಯುದಾಗಿ ಹೇಳಿದ್ದಾನೆ. ಈತನಿಗೆ ತಾಕತ್ತು, ಧಮ್ ಇದ್ದರೆ ಮಂತ್ರಿಗಳ ಮುಂದೆ ನಿಂತು ಮಾತಾಡಲಿ. ಅಷ್ಟು ಧೈರ್ಯ ಇದ್ದಿದ್ದರೆ ಮಂತ್ರಿಗಳ ಜೊತೆ ಮಾತನಾಡುತಿದ್ದ, ಈ ರೀತಿ ಮಾಧ್ಯಮದ ಮುಂದೆ ಹೋಗುತ್ತಾ ಇರಲಿಲ್ಲ ಎಂದು ಸವಾಲು ಹಾಕಿದರು.