ಗ್ರಾಪಂ-ಎಸ್ಡಿಎಂಸಿ ಮಧ್ಯೆ ಕಾಮಗಾರಿ ತಿಕ್ಕಾಟ
Sep 25 2024, 12:50 AM ISTಕನ್ನಡಪ್ರಭ ವಾರ್ತೆ ಚಡಚಣ ತಾಲ್ಲೂಕಿನ ಉಮರಜ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು ಕೂಡಲೇ ಪೂರ್ಣಗೊಳಿಸುವಂತೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸೇರಿದಂತೆ ಸದಸ್ಯರು ಆಗ್ರಹಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಪ್ರೌಢ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಚಿದಾನಂದ ಭೂಪಾಳಿ, ಶಾಲಾ ಕಾಂಪೌಂಡ್, ಆಟದ ಮೈದಾನ ಹಾಗೂ ಶೌಚಾಲಯ ನಿರ್ಮಾಣಕ್ಕೆ ಸುಮಾರು ₹ 56 ಲಕ್ಷ ಮಂಜೂರಾತಿ ದೊರಕಿದೆ.