ಅವೈಜ್ಞಾನಿಕ ಕಾಮಗಾರಿ ಸರಿಪಡಿಸಲು ರಾ. ಹೆದ್ದಾರಿ ಅಧಿಕಾರಿಗಳಿಗೆ ಸಂಸದರ ಖಡಕ್ ಸೂಚನೆ
Aug 28 2024, 12:54 AM ISTಬೀರೂರು, ಈ ಹಿಂದೆ ಸರಾಗವಾಗಿ ನೀರು ಹರಿಯುತ್ತಿದ್ದ ಚಾನಲ್‌ಗೆ ಹೆದ್ದಾರಿಯ ಅವೈಜ್ಞಾನಿಕ, ಮುಂದಾಲೋಚನೆ ಇಲ್ಲದ ಕಾಮಗಾರಿ ಪರಿಣಾಮ ಅವ್ಯವಸ್ಥೆ ಉಂಟಾಗಿ, ಕೃಷಿಕರು, ವಾಹನ ಸವಾರರು ಹಾಗೂ ಬಡಾವಣೆ ನೂರಾರು ಜನರಿಗೆ ಸಂಕಷ್ಟ ಎದುರಾಗಿದೆ. ಇಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ನೀವೆ ಜವಾಬ್ದಾರಾಗುತ್ತೀರಿ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸಂಸದ ಶ್ರೇಯಸ್ ಪಟೇಲ್ ಖಡಕ್ ಎಚ್ಚರಿಕೆ ನೀಡಿದರು.