ಲಾಭದಲ್ಲಿ ಬೆಳವಾಡಿ ಕೃಷಿ ಸಹಕಾರಿ ಸಂಘ
Sep 07 2024, 01:37 AM ISTಬೆಳವಾಡಿ ಕೃಷಿ ಪತ್ತಿನ ಸಹಕಾರಿ ಸಂಘವು 1976ರಲ್ಲಿ ಪ್ರಾರಂಭವಾಗಿ 2023-24ರ ವೇಳೆಗೆ ಸುಮಾರು 996 (ಷೇರುದಾರರನ್ನು) ಒಟ್ಟು 36 ಲಕ್ಷರೂಗಳ ಷೇರು ಹಣವನ್ನು ಹೊಂದಿದ್ದು, ಕೃಷಿ ಸಾಲ ಮರುಪಾವತಿಯಲ್ಲಿ ದಾಖಲೆಯನ್ನು ಹೊಂದಿದೆ. 2023-24ರಲ್ಲಿ ಒಟ್ಟು 5,91,000 (ಐದು ಲಕ್ಷದ ತೊಂಬತ್ತೊಂದು ಸಾವಿರ) ನಿವ್ವಳ ಲಾಭವನ್ನು ಗಳಿಸಿದೆ ಎಂದು ಬೆಳವಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಹಾಲಿ ಅಧ್ಯಕ್ಷರಾದ ಆರ್ ನಿಂಗೇಗೌಡ ತಿಳಿಸಿದರು. 2023-24 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಎಲ್ಲ ನಿರ್ದೇಶಕರ ಸಹಕಾರ ಸಲಹೆಗಳಿಂದ ಸಂಘವು ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿದೆ ಎಂದರು.