ಕೆಪಿಎಂಇ ಆಕ್ಟ್ ಗೆ ಒಳಪಡದ ಕ್ಲಿನಿಕ್‌ಗಳ ಮೇಲೆ ಟಿಎಚ್‌ಒ ದಾಳಿ

Dec 15 2023, 01:31 AM IST
ತಾಲೂಕಿನಾದ್ಯಂತ 13 ಅನಧಿಕೃತ ಕ್ಲಿನಿಕ್‌ಗಳ ಮೇಲೆ ದಾಳಿ ಮಾಡಿ, ಬಾಗಿಲು ಬಂದ್ ಮಾಡಿಸಿದ್ದೇವೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಹೇಮಾವತಿ ತಿಳಿಸಿದರು. ಸೋಂಪುರ ಹೋಬಳಿಯಲ್ಲಿ 5 ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ನೋಟೀಸ್ ನೀಡಿ ಬೀಗ ಜಡಿದು, ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಪರವನಾಗಿ ಇಲ್ಲದೆ ಅನಧಿಕೃತವಾಗಿ ಕೆ.ಪಿ.ಎಂ.ಇ (ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಬಲೀಶ್‌ಮೆಂಟ್ ಆಕ್ಟ್) 2009 ಪ್ರಕಾರ ನಮೂದಿಸಿದೇ, ನೋಟೀಸ್ ನೀಡಿದರೂ ಸ್ಪಂದಿಸದ ಕ್ಲಿನಿಕ್‌ಗಳಾದ, ದಾಬಸ್ ಪೇಟೆ ಪಟ್ಟಣದ ಮೂಲವ್ಯಾಧಿ ಚಿಕಿತ್ಸಾಲಯ, ಪೆಮ್ಮನಹಳ್ಳಿಯ ಶ್ರೀ ತಿರುಮಲ ಕ್ಲಿನಿಕ್, ನಿಡವಂದದ ಸಿದ್ದಗಂಗಾ, ಶ್ರೀ ಮಾರುತಿ, ಶ್ರೀ ನಂದಿ ಹಾಗೂ ನರಸೀಪುರದ ಮಾರುತಿ ಕ್ಲಿನಿಕ್‌ಗಳನ್ನು ಸೀಜ್ ಮಾಡಿ ನಂತರ ನೋಟೀಸ್‌ನ್ನು ಕ್ಲಿನಿಕ್ ಗಳ ಮುಂಭಾಗಕ್ಕೆ ಅಂಟಿಸಿದ್ದೇವೆ ಎಂದರು.