ಅಬಕಾರಿ ಇಲಾಖೆ ದಾಳಿ: 43.2 ಲೀ ಮದ್ಯ ಜಪ್ತಿ
Apr 29 2024, 01:33 AM ISTಬಾಗಲಕೋಟೆಮುಧೋಳ ವಲಯ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಒಟ್ಟು 43.2 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ಶನಿವಾರ ಜಪ್ತಿ ಮಾಡಿಕೊಂಡಿದೆ.ಮುಧೋಳ ವಲಯ ವ್ಯಾಪ್ತಿಯ ರನ್ನ ಮತ್ತು ಮಾಚಕನೂರು ಸರ್ಕಲ್ ನಲ್ಲಿ ಖಚಿತ ಮಾಹಿತಿ ಮೇರೆಗೆ ರಸ್ತೆ ಕಾವಲು ನಡೆಸಿ ಮೂರು ದ್ವಿಚಕ್ರ ವಾಹನಗಳ ಸಮೇತ ಒಟ್ಟು 43.2 ಲೀಟರ್ ಮದ್ಯವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿ ಗಂಗಪ್ಪ ಕರಿಯಪ್ಪ ತಳವಾರ ಬಂಧಿಸಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.