ಚಿರತೆಗಳ ದಾಳಿ ಕೊಟ್ಟಿಗೆಯಲ್ಲಿದ್ದ 10 ಮೇಕೆಗಳು ಬಲಿ..!
May 09 2025, 12:32 AM ISTಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ ಮೇಕೆಗಳ ಮೇಲೆ ಚಿರತೆಗಳು ದಾಳಿ ನಡೆಸಿ ಸುಮಾರು ಹತ್ತು ಮೇಕೆಗಳನ್ನು ಕೊಂದು ಪರಾರಿಯಾಗಿರುವ ಘಟನೆ ಪಾಂಡವಪುರ ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಗ್ರಾಮದ ಚಿಕ್ಕಬೋರೇಗೌಡರ ಪುತ್ರ ನಿತಿನ್ ಅವರಿಗೆ ಸೇರಿದ ಮೇಕೆಗಳು ಸಾವನ್ನಪ್ಪಿದ್ದು, ರೈತನಿಗೆ ಲಕ್ಷಾಂತರ ರು. ನಷ್ಟವಾಗಿದೆ.