ಪಿಆರ್ಇಡಿ ಕಚೇರಿಯಲ್ಲಿ ೩.೫೧ ಕೋಟಿ ರು.ದುರ್ಬಳಕೆ ಪ್ರಕರಣ: ಅಧಿಕಾರಿಗಳ ಅಸಹಕಾರ
Aug 11 2024, 01:42 AM ISTಯಾವುದೇ ಒಂದು ಪ್ರಕರಣದಲ್ಲಿ ವಿಚಾರಣಾಧಿಕಾರಿಯನ್ನು ನೇಮಿಸಿದ ತರುವಾಯ ವಿಚಾರಣೆ ನಡೆಸಲು ಹಾಗೂ ವಿಚಾರಣಾ ವರದಿ ಸಲ್ಲಿಸಲು ನಾಲ್ಕು ತಿಂಗಳ ಕಾಲಾವಕಾಶ ನಿಗದಿಪಡಿಸಲಾಗಿದೆ. ಆದರೆ, ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳಾದ ಪಿ.ರವಿಕುಮಾರ್, ಡಿ.ಬಿ.ಕವಿತಾ, ಪ್ರವೀಣ್ಕುಮಾರ್, ಅನಿತಾ, ಕೋಮಲ, ಡಿ.ರಾಮೇಗೌಡ, ಎಂ.ಎಲ್.ಭಾಗ್ಯಲಕ್ಷ್ಮೀ ಅವರು ವಿಚಾರಣೆಗೆ ಪದೇ ಪದೇ ಗೈರು ಹಾಜರಾಗುತ್ತಿರುವುದರಿಂದ ಪ್ರಕರಣದ ಇಲಾಖಾ ವಿಚಾರಣೆ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.