ಗುರುವಾರ ನಿಧನರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಗಲಿಕೆಗೆ ವಿದೇಶದಲ್ಲಿಯೂ ಸಂತಾಪ ವ್ಯಕ್ತವಾಗಿದೆ. ಅಮೆರಿಕ, ಚೀನಾ, ಬ್ರಿಟನ್, ಕೆನಡಾ, ಫ್ರಾನ್ಸ್ ಸೇರಿದಂತೆ ಹಲವು ರಾಷ್ಟ್ರಗಳ ರಾಜಕೀಯ ನಾಯಕರು ಕಂಬನಿ ಮಿಡಿದ್ದಾರೆ.
ನನ್ನನ್ನು ನಾನು ದುರ್ಬಲ ಎಂದು ನಂಬುವುದಿಲ್ಲ. ಇತಿಹಾಸ ನನ್ನ ಮೇಲೆ ದಯ ತೋರಲಿದೆ ಎಂಬ ಎಂಬ ಮಾಜಿ ಪ್ರಧಾನಿ ಮನಮೋಹನ್ ಅವರ ಮಾತುಗಳು ಅವರ ಜೀವಿತಾವಧಿಯಲ್ಲೇ ನಿಜವಾಗಿತ್ತು
ಆಧುನಿಕ ಭಾರತದ ಕೀರ್ತಿ ಪತಾಕೆಯನ್ನು ಜಗದೆತ್ತರಕ್ಕೆ ಏರಿಸಿದ್ದ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಗುರುವಾರ ರಾತ್ರಿ ಇಲ್ಲಿ ನಿಧನರಾದರು.