ಬಿಎಸ್ವೈ, ಬಿವೈಆರ್ ಕೂಡ ಪ್ರಮಾಣ ಮಾಡಲಿ: ಕೆ.ಎಸ್.ಈಶ್ವರಪ್ಪ ಪ್ರತಿ ಸವಾಲು
Apr 02 2024, 01:06 AM ISTವಿಧಾನಸಭಾ ಚುನಾವಣೆಯಲ್ಲಿ ಕೆ.ಇ.ಕಾಂತೇಶ್ ಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವ ಜೊತೆಗೆ ಪ್ರಚಾರಕ್ಕೂ ಬರುವುದಾಗಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದರು. ಆದರೆ, ನಂತರದ ದಿನಗಳಲ್ಲಿ ನುಡಿದಂತೆ ನಡೆಯದೇ ಮಾತು ತಪ್ಪಿದ್ದಾರೆ. ಯಡಿಯೂರಪ್ಪ ಕುಟುಂಬ ತಮಗೆ ಮಾಡಿದ ಮೋಸ ಜನತೆಗೆ ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಚಂದ್ರಗುತ್ತಿ ರೇಣುಕಾಂಬಾ ದೇವಿ ಅಲ್ಲದೇ ಅಯೋಧ್ಯೆಗೂ ಹೋಗಿ ಪ್ರಮಾಣ ಮಾಡುತ್ತೇನೆ. ರಾಘವೇಂದ್ರ ಅಲ್ಲದೇ ಬಿ.ಎಸ್.ಯಡಿಯೂರಪ್ಪ ಕೂಡ ಪ್ರಮಾಣ ಮಾಡಬೇಕು.