ಪಂಪ್ಸೆಟ್ ಕಳ್ಳರ ಬಂಧನ:೧೫ ಪಂಪ್ಸೆಟ್, ೧ ಬೈಕ್ ವಶ
Aug 05 2024, 12:35 AM ISTಆಲಮೇಲ: ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದ ಬಳಿಯ ಕಾಲುವೆಯಲ್ಲಿ ನೀರು ಹಾಯಿಸಲು ಹಾಕಲಾಗಿದ್ದ ಪಂಪ್ಸೆಟ್ಗಳನ್ನು ಕಳ್ಳತನ ಮಾಡಿದ್ದ ಕಳ್ಳರನ್ನು ಆಲಮೇಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 15 ಪಂಪ್ಸೆಟ್ ಹಾಗೂ 1 ಬೈಕ್ನ್ನು ಜಪ್ತಿ ಮಾಡಿದ್ದಾರೆ. ಸುಂದರ ಭಗವಂತ ಕ್ಷತ್ರಿ (೨೪), ಕೃಷ್ಣಾ ಶ್ರಿಶೈಲ್ ಟಕ್ಕಳಕಿ (೨೦), ಸಿದ್ದಪ್ಪ ಸುಭಾಷ ಟಕ್ಕಳಕಿ (೩೫), ಸಂತೋಷ ಅಭಿಮನ್ಯು ಕ್ಷತ್ರಿ (೨೭) ಎಲ್ಲರೂ ಬಳಗಾನೂರ ಗ್ರಾಮದವರಾಗಿದ್ದು, ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.