• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮುಂದು ಮುಂದುವರಿದ ಮಳೆ: ಅಲ್ಲಲ್ಲಿ ಗೋಡೆ, ಮರ ಧರೆಗೆ

Jul 20 2024, 12:47 AM IST
ನರಸಿಂಹರಾಜಪುರ, ತಾಲೂಕಿನಾದ್ಯಂತ ಮಳೆ ಬಿರುಸುಗೊಂಡಿದ್ದು ಕೆಲವು ಗ್ರಾಮಗಳಲ್ಲಿ ಮನೆಗಳ ಗೋಡೆ ಕುಸಿತ ಕಂಡಿದೆ. ಶುಕ್ರವಾರ ಸಂಜೆ ಕುದುರೆಗುಂಡಿ - ಬಿ. ಎಚ್.ಕೈಮರ ಮಧ್ಯೆ ಬರುವ ಚಿಟ್ಟಿಕೊಡಿಗೆಯ ಮುಖ್ಯ ರಸ್ತೆಯಲ್ಲಿ ಮರ ಉರುಳಿ ಬಿದ್ದು ಕೆಲವು ಸಮಯದವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಆಡಳಿತಾಧಿಕಾರಿ ಕುಮಾರಸ್ವಾಮಿ ಹಾಗೂ ಗ್ರಾಮಸ್ಥರು ಸೇರಿ ಮರ ತೆರವುಗೊಳಿಸಿದರು.

ಮಳೆ ಹಿನ್ನೆಲೆ ಕಟ್ಟೆಚ್ಚೆರ ವಹಿಸಿ: ಕೃಷ್ಣಬೈರೇಗೌಡ

Jul 20 2024, 12:47 AM IST
ರಾಜ್ಯದ ಪಶ್ಚಿಮಘಟ್ಟ ಪ್ರದೇಶ ಸೇರಿದಂತೆ ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಉಂಟಾದ ರಸ್ತೆ ಸಂಪರ್ಕ ಕಡಿತ, ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಸೋರಿಕೆ ಮತ್ತು ವಿದ್ಯುತ್ ಸಂಪರ್ಕ ಕಡಿತದ ದುರಸ್ತಿ ತಕ್ಷಣವೇ ಕೈಗೊಳ್ಳುವ ಮೂಲಕ ಯಥಾಸ್ಥಿತಿಯಂತೆ ನಿರ್ವಹಣೆ ಮಾಡಲು ಮುಂದಿನ ಮೂರು ದಿನಗಳ ಕಾಲ ಕಟ್ಟೆಚ್ಚರ ವಹಿಸಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸೂಚಿಸಿದ್ದಾರೆ.

ಕಾರ್ಕಳ ಮಳೆ ಆರ್ಭಟ: ನೀರಿನಲ್ಲಿ ಕೊಚ್ಚಿ ಹೋದ ಕಾರ್ಮಿಕ

Jul 20 2024, 12:46 AM IST
ಭಾರಿ ಮಳೆಗೆ ನದಿ ದಾಟುತ್ತಿದ್ದ ವೇಳೆ ಕಾರ್ಮಿಕನೋರ್ವ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಇನ್ನಾ ಗ್ರಾಮದಲ್ಲಿ ಪ್ರವಾಹ ಉಂಟಾಗಿ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಸಮೃದ್ಧ ಮಳೆ, ಬೆಳೆಗೆ 7 ಗ್ರಾಮಗಳಿಗೆ ಪಾದಯಾತ್ರೆ

Jul 20 2024, 12:46 AM IST
ದೇವಾಲಯಗಳಲ್ಲಿ ಭಜನೆ ಇತರೆ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ರಾಮಕ್ಕೆ ಒಳಿತು ಮಾಡುವಂತೆ ಗ್ರಾಮ ದೇವರಲ್ಲಿ ಮೊರೆಯಿಟ್ಟು ಮತ್ತೆ ಮುಂದಿನ ಗ್ರಾಮಕ್ಕೆ ಭಜನೆ, ಕೀರ್ತನೆ ಮಾಡುತ್ತಾ ಭಕ್ತರು ಪಾದಯಾತ್ರೆ ಮುಂದುವರೆಸಿದರು.

ಕೊಡಗು ಜಿಲ್ಲೆಯಲ್ಲಿ ತಗ್ಗಿದ ಮಳೆ ಆರ್ಭಟ: ಪ್ರವಾಹ ಯಥಾಸ್ಥಿತಿ

Jul 20 2024, 12:45 AM IST
ಜಿಲ್ಲೆಯಾದ್ಯಂತ ಶುಕ್ರವಾರ ಮಳೆಯಬ್ಬರ ಕೊಂಚ ಕಡಿಮೆಯಾಗಿದೆ. ಆದರೂ ಕೆಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಅಲ್ಲದೆ ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದೆ. ಶನಿವಾರ ಕೂಡ ವ್ಯಾಪಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಕೊಡಗು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಉಡುಪಿ: ಜಿಲ್ಲೆಯಲ್ಲಿ ಮತ್ತೆ ಧಾರಾಕಾರ ಮಳೆ : ಭಾರಿ ಮಳೆಗೆ 200 ವರ್ಷದ ಅರಳಿಮರ ಧರಶಾಹಿ!

Jul 19 2024, 12:56 AM IST
ಬೃಹತ್‌ ಗಾತ್ರದ ಅರಳಿಮರ ಪಕ್ಕದ ಹಳೇಕೋಟೆ ಮನೆಯ ಕಂಪೌಂಡ್‌ ಒಳಗೆ ಬಿದ್ದಿದ್ದು, ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಸೇರಿದಂತೆ 4-5 ವಿದ್ಯುತ್ ಕಂಬಗಳು ತುಂಡಾಗಿವೆ.

ಭಾರೀ ಮಳೆ : ಅಲ್ಲಲ್ಲಿ ಗೋಡೆ ಕುಸಿತ, ಸೇತುವೆಗೆ ಹಾನಿ - ಜನಜೀವನ ಸಂಪೂರ್ಣ ಅಸ್ತವ್ಯಸ್ತ

Jul 19 2024, 12:55 AM IST
ನರಸಿಂಹರಾಜಪುರ: ಗುರುವಾರ ಬೆಳಿಗ್ಗೆಯಿಂದ ಕಡಿಮೆ ಇದ್ದ ಮಳೆ ಮಧ್ಯಾಹ್ನದ ನಂತರ ತೀವ್ರಗೊಂಡು ಸಂಜೆಯವರೆಗೂ ಭಾರೀ ಮಳೆ ಸುರಿದಿದೆ.

ನಿರಂತರ ಮಳೆ: ಜನ- ವಾಹನ ಸಂಚಾರಕ್ಕೆ ಅಡ್ಡಿ

Jul 19 2024, 12:53 AM IST
ಕಡೂರು- ಬೀರೂರು ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲೂ 6ನೇ ದಿನದ ಪುನರ್ವಸು ಮಳೆಯಿಂದ ಅಲ್ಲಲ್ಲಿ ಸ್ವಲ್ಪಮಟ್ಟಿಗೆ ತೊಂದರೆ ಆಗಿದ್ದು, ಕೆಲವೆಡೆ ಜನ- ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು ಅಲ್ಲಲ್ಲಿ ಸಣ್ಣ ಪುಟ್ಟ ಮರಗಳು ಬಿದ್ದಿವೆ. ಇನ್ನು ಕಡೂರು ತಾಲೂಕಿನ ಜನರ ಜೀವನ ನಾಡಿಯಾದ ಎಮ್ಮೇದೊಡ್ಡಿಯ ಮದಗದಕೆರೆಗೆ ಸದ್ಯಕ್ಕೆ ಸುಮಾರು 46 ಅಡಿ ಗಳಷ್ಟು ನೀರು ಬಂದಿದೆ ಎಂದು ತಿಳಿದು ಬಂದಿದೆ

ಕೊಪ್ಪದಲ್ಲಿ ಭಾರೀ ಮಳೆ: ಬಸ್ರಿಕಟ್ಟೆಯಲ್ಲಿ ಅಧಿಕಾರಿಗಳ ವಿರುದ್ಧ ಜನಾಕ್ರೋಶ

Jul 19 2024, 12:53 AM IST
ಕೊಪ್ಪ, ತಾಲೂಕಿನಾದ್ಯಂತ ಗುರುವಾರ ಮಧ್ಯಾಹ್ನದಿಂದಲೇ ಮಳೆ ಬಿರುಸುಗೊಂಡಿದ್ದು ನದಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗಸರಕೇರಿಯ ಕಾಣಿಹಳ್ಳ ತುಂಬಿ ಹರಿದಿದ್ದರಿಂದ ಕೊಪ್ಪ ಚಿಕ್ಕಮಗಳೂರು ರಸ್ತೆಯ ಖಾಸಗಿ ಗ್ಯಾಬ್ರಿಯಲ್ ಲೇಔಟ್ ಸಂಪೂರ್ಣ ಜಲಾವೃತಗೊಂಡಿದೆ.

ಪುನರ್ವಸು ಮಳೆಯಾರ್ಭಟ : ಶಿವಮೊಗ್ಗದಲ್ಲಿ 24 ಗಂಟೆಗಳಲ್ಲಿ 185 ಮಿ.ಮೀ. ಮಳೆ ದಾಖಲು

Jul 19 2024, 12:50 AM IST
ಶಿವಮೊಗ್ಗದಲ್ಲಿ ಮುಂದುವರಿದ ಪುನರ್ವಸು ಮಳೆಯಾರ್ಭಟ ಹೆಚ್ಚಿದ್ದು, ತುಂಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.
  • < previous
  • 1
  • ...
  • 77
  • 78
  • 79
  • 80
  • 81
  • 82
  • 83
  • 84
  • 85
  • ...
  • 132
  • next >

More Trending News

Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved