ವಿರೋಧಿಸುವ, ಟೀಕಿಸುವ ಮೋದಿ ಶೈಲಿ ಬದಲಾಗಿದೆ

Apr 22 2024, 02:17 AM IST
ವಿಜಯಪುರ: ಚುನಾವಣೆ ಸಮಯದಲ್ಲಿ ಬಿಜೆಪಿಯವರು ಸುಳ್ಳು ಪ್ರಚಾರಗಳನ್ನು ಮಾಡುತ್ತ, ಜನತೆಗೆ ತಪ್ಪು ಮಾಹಿತಿ ಕೊಡುವುದರಲ್ಲಿ ನಿರತರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಕಾರ್ಯಕ್ರಮಗಳನ್ನು ಹಾಗೂ ನಾಯಕರ ಹೇಳಿಕೆಗಳನ್ನು ವಿರೋಧಿಸುವುದು, ಟೀಕಿಸುವ ಶೈಲಿಯೇ ಬದಲಾಗಿದೆ. ನಮ್ಮ‌ ಕಾರ್ಯಕ್ರಮಗಳು ದೇಶವನ್ನು ಹಾಳು ಮಾಡುತ್ತವೆ, ದೇಶ ದಿವಾಳಿಯಾಗುತ್ತದೆ ಎಂದು ಹೇಳುತ್ತಿರುವುದು ಅವರಿಗೆ ಶೋಭೆ ತರೋದಿಲ್ಲ. ಮುನ್ಸಿಪಾಲಿಟಿ ಚುನಾವಣೆಯಲ್ಲಿ ಹೇಳುವ ರೀತಿ ಲೋಕಸಭಾ ಚುನಾವಣೆಯಲ್ಲಿ ಹೇಳಿದರೆ ಅದು ಪ್ರಧಾನಿ ಘನತೆ ಕಡಿಮೆ ಆದಂತಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ.