ರಸ್ತೆ ಸುರಕ್ಷತಾ ನಿಯಮ ಕಡ್ಡಾಯವಾಗಿ ಪಾಲಿಸಬೇಕು: ಜಿ.ಎಚ್.ಶ್ರೀನಿವಾಸ್
Sep 17 2025, 01:06 AM ISTತರೀಕೆರೆಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ. ವಲಯ -7, ಜಿಲ್ಲೆ-3182, ರೋಟರಿ ಕ್ಲಬ್ ತರೀಕೆರೆಯಿಂದ, ತರೀಕೆರೆಯಿಂದ ಕೊಡಚಾದ್ರಿವರೆಗೆ ರೋಟರಿ ಕ್ಲಬ್ ಸದಸ್ಯರು ಬೈಕ್ ಮತ್ತು ಕಾರ್ ನಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.