ಸಿಡಿಲಿಗೆ ರೈತ ಸಾವು: ಜಿಲ್ಲೆಯಲ್ಲಿ ಇದು 4ನೇ ಬಲಿ
Apr 14 2024, 01:48 AM ISTವಿಜಯಪುರ: ಜಮೀನಿನಲ್ಲಿ ಬೆಳೆಗೆ ನೀರು ಹಾಯಿಸಿ ವಾಪಸಾಗುತ್ತಿದ್ದ ವೇಳೆ ಸಿಡಿಲು ಬಡಿದು ರೈತನೊರ್ವ ಮೃತಪಟ್ಟ ಘಟನೆ ತಾಲೂಕಿನ ಮದಭಾವಿ ತಾಂಡಾ 2ರಲ್ಲಿ ಶುಕ್ರವಾರ ನಡೆದಿದೆ. ಮದಭಾವಿ ಎಲ್‌ಟಿ 2ರ ನಿವಾಸಿ ರೈತ ಲಕ್ಷ್ಮಣ ಸೋಮಲು ರಾಠೋಡ (72) ಸಿಡಿಲಿಗೆ ಬಲಿಯಾದ ರೈತ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.