ಚಾಪೆಲ್ ನೌಕೆ, ಟುಪೆಲೊ ವಿಮಾನ ವೀಕ್ಷಿಸಿದ ಡಿಸಿ
Oct 13 2023, 12:15 AM ISTಆ. ೧೩ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ನಿರ್ವಹಣೆ ಇಲ್ಲದೇ ತುಕ್ಕುಹಿಡಿಯುತ್ತಿರುವ ಐಎನ್ಎಸ್ ಚಾಪೆಲ್ ನೌಕೆಯ ಕುರಿತು ವರದಿ ಪ್ರಕಟಿಸಲಾಗಿತ್ತು. ನೌಕೆಯ ಕುರಿತಾದ ಸಮಗ್ರ ವರದಿ, ನಿರ್ವಹಣೆ ಇಲ್ಲದೇ ಆಗುತ್ತಿರುವ ಸಮಸ್ಯೆ ಮೊದಲಾದ ವಿಷಯವನ್ನು ಸವಿಸ್ತಾರವಾಗಿ ಬರೆಯಲಾಗಿತ್ತು. ಗುರುವಾರ ಡಿಸಿ ಭೇಟಿ ನೀಡಿ ಪರಿಶೀಲಿಸಿ ನಿರ್ವಹಣೆ ಕುರಿತು ನೌಕಾನೆಲೆಯೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.