ಮಲ್ಪೆಯ ಬಹದ್ದೂರ್‌ಘಡ ದ್ವೀಪಕ್ಕೆ ಶಾಸಕ, ಡಿಸಿ ಭೇಟಿ
Feb 19 2025, 12:46 AM ISTಮಲ್ಪೆ ಕರಾವಳಿ ಕಾವಲು ಪೊಲೀಸ್ ವತಿಯಿಂದ ಮಲ್ಪೆ ಸಮೀಪದ ದರಿಯಾ ಬಹದ್ದೂರ್‌ಘಡ (ಲೈಟ್ ಹೌಸ್) ದ್ವೀಪ ಹಾಗೂ ಕೋಟೆ ದ್ವೀಪಗಳ ಭದ್ರತೆ, ಸ್ವಚ್ಛತೆ ಹಾಗೂ ಸಮಗ್ರ ಅಭಿವೃದ್ಧಿ ಧ್ಯೇಯದೊಂದಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಂಗಳವಾರ ಇತರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.