ವಿವಿಧ ತಳಿಯ ಶ್ವಾನ ಪ್ರದರ್ಶನಕ್ಕೆ ಶಾಸಕ ಸ್ವರೂಪ್ ಚಾಲನೆ
Nov 18 2024, 12:01 AM ISTಶ್ವಾನ ಪ್ರದರ್ಶನದಲ್ಲಿ, ಸುಮಾರು ೨೫ ತಳಿಯ ೨೦೦ಕ್ಕೂ ಹೆಚ್ಚು ಶ್ವಾನಗಳು ಈ ಪ್ರದರ್ಶನದಲ್ಲಿ ತಮ್ಮ ತಮ್ಮ ಮಾಲೀಕರೊಂದಿಗೆ ಭಾಗಿಯಾಗಿ ಗಮನ ಸೆಳೆದವು. ವಿವಿಧ ತಳಿಯ ಶ್ವಾನಗಳನ್ನು ಒಂದೇ ಕಡೆ ಕಂಡ ಡಾಗ್ಸ್ ಪ್ರಿಯರು, ಸಖತ್ ಖುಷಿ ಪಟ್ಟರು. ವಿವಿಧ ಆಕಾದಲ್ಲಿದ್ದ ನಾಯಿಗಳು ನೋಡುಗರನ್ನು ಆಕರ್ಷಿಸಿದವು. ಇಂದು ಭಾನುವಾರವಾದ್ದರಿಂದ ನಿರೀಕ್ಷೆಗೂ ಮೀರಿ ಶ್ವಾನ ಪ್ರಿಯರು ಜಮಾಯಿಸಿ, ವಿವಿಧ ಬಗೆಯ ನಾಯಿ ಮತ್ತು ಅವುಗಳ ತುಂಟಾಟ ಕಂಡು ಸಖತ್ ಮನರಂಜನೆ ಪಡೆದರು.