ರದ್ದಾದ ನಾಲ್ಕು ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಪ್ರಯತ್ನ: ಶಾಸಕ ಮಂತರ್ ಗೌಡ ಭರವಸೆ
Oct 18 2024, 12:14 AM ISTಜಿಲ್ಲೆಯಲ್ಲಿ ೮೦ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿದ್ದು, ಅದರಲ್ಲಿ ನಾಲ್ಕು ಮಾರ್ಗಗಳು ರದ್ದಾಗಿವೆ. ಅವನ್ನು ಮತ್ತೆ ಬಿಡುವಂತೆ ಸಂಬಂಧಿಸಿದ ಡಿಪೋ ವ್ಯವಸ್ಥಾಪಕರಲ್ಲಿ ಮನವಿ ಮಾಡಲಾಗುವುದು. ಶಕ್ತಿ ಯೋಜನೆಯಲ್ಲಿ ೭೫,೪೪,೬೪೬ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಅದರ ಬಾಬ್ತು ರು. ೨೯,೭೨,೧೫,೦೫೯ ಹಣವನ್ನು ಇಲಾಖೆಗೆ ರಾಜ್ಯ ಸರ್ಕಾರ ತುಂಬಿಸಿಕೊಟ್ಟಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.