ಕೆರಗೋಡಿಗೆ ಹೊರಗಿನವರಿಂದ ವಿಷ: ಶಾಸಕ ಪಿ.ರವಿಕುಮಾರ್
Feb 05 2024, 01:45 AM ISTನಾನು ಶ್ರೀರಾಮ, ಹನುಮ ವಿರೋಧಿಯಲ್ಲ. ನಮ್ಮ ಮನೆಗೂ ಕೂಡ ಕೇಸರಿ ಧ್ವಜ ನೀಡಲಿ ತೆಗೆದುಕೊಳ್ಳುತ್ತೇನೆ. ಬೆಂಕಿ ಹಚ್ಚುವ ಕೆಲಸ ಮಾಡುವುದು ಬೇಡ. ಚುನಾವಣೆಗಾಗಿ ನಾನು ರಾಜಕೀಯ ಮಾಡಲ್ಲ. ಕಾಲಭೈರವ, ಶನಿಮಹಾತ್ಮ, ಶ್ರೀಆಂಜನೇಯ ಸ್ವಾಮಿಯನ್ನು ಪೂಜೆ ಮಾಡಿಯೇ ಬಂದು ಮಾತನಾಡುತ್ತಿದ್ದೇನೆ. ನಾನು ಯಾವ ದೇವರ ವಿರೋಧಿಯೂ ಅಲ್ಲ.