ಹೆಣ್ಣುಮಕ್ಕಳ ಮಾನ ಬೀದಿಗೆ ತಂದವರನ್ನು ಗಲ್ಲಿಗೇರಿಸಿ: ಶಾಸಕ
May 09 2024, 01:11 AM ISTಪೆನ್‌ಡ್ರೈವ್ ಪ್ರಕರಣದ ಹಲವು ಸಂತ್ರಸ್ತ ಮಹಿಳೆಯರು ಆತ್ಮಹತ್ಯೆಗೆ ಮುಂದಾಗಿದ್ದರೆ, ಇನ್ನೂ ಕೆಲವರು ಗಂಡನನ್ನು ಬಿಡುವಂತಾಗಿದೆ. ಇದಕ್ಕೆ ಕಾರಣ ಯಾರು? ನಾಲ್ಕು ಗೋಡೆ ಮಧ್ಯೆ ನಡೆದಿರುವ ಕ್ರಿಯೆ ತಪ್ಪಾಗಿದ್ದರೆ ನೊಂದ ಮಹಿಳೆಯರು ದೂರು ನೀಡುತ್ತಿದ್ದರು. ಆದರೆ ಎಸ್‌ಐಟಿ ಅಧಿಕಾರಿಗಳೇ ಮಹಿಳೆಯನ್ನು ಹುಡಿಕಿಕೊಂಡು ಹೋಗುತ್ತಿದ್ದಾರಂತೆ. ಕೆ.ಆರ್.ನಗರದಲ್ಲಿ ಸಂತ್ರಸ್ತೆಯ ಸಂಬಂಧಿಯೊಬ್ಬರನ್ನು ಬಂಧಿಸಿರುವ ಪೊಲೀಸರು, ರೇವಣ್ಣ ಅವರ ಆಪ್ತ ಸಹಾಯಕನ ತೋಟದಮನೆಯಲ್ಲಿ ಬಂಧಿಸಿದ್ದೇವೆಂದು ಸುಳ್ಳು ಹೇಳುತ್ತಿರುವ ನಿಮಗೆ ಮಾನ ಮಾರ್ಯಾದೆ ಇದೆಯಾ?