ಸಂಸದ ಶ್ರೇಯಸ್ ಮೇಲೆ ಶಾಸಕ ಮಂಜು ಮುನಿಸು
Jan 09 2025, 12:48 AM IST ಸಂಸದ ಶ್ರೇಯಸ್ ಪಟೇಲ್ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶಾಸಕರ ಗೈರಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಅಧೀಕೃತ ಸಭೆ ನಡೆಸಿರುವುದು ಶಾಸಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸಭೆ ನಡೆಸಲು ಅನುವು ಮಾಡಿಕೊಟ್ಟ ಅಧಿಕಾರಿಗಳು ಹಾಗೂ ಸಂಸದರ ವಿರುದ್ಧ ಸರ್ಕಾರಕ್ಕೆ ದೂರು ನೀಡಲು ಶಾಸಕ ಮಂಜು ಸಜ್ಜಾಗಿದ್ದಾರೆ. ಅನಾವಶ್ಯಕವಾಗಿ ಸಂವಿಧಾನಕ್ಕೆ ಅಪಚಾರ ಮಾಡುತ್ತಿರುವ ಸಂಸದರ ನಡೆಯ ಬಗ್ಗೆ ಸದನದಲ್ಲಿ ಧ್ವನಿ ಎತ್ತಲಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.