ಆರೋಗ್ಯವಂತ ಯುವ ಸಮಾಜ ನಿರ್ಮಿಸಲು ಕ್ರೀಡೆಯೊಂದೇ ದಾರಿ: ಶಾಸಕ ಕೋಳಿವಾಡ
Jan 05 2025, 01:33 AM ISTಆರೋಗ್ಯವಂತ ಯುವ ಸಮಾಜವನ್ನು ನಿರ್ಮಿಸಲು ಕ್ರೀಡೆಯೊಂದೇ ದಾರಿ. ಆದರೆ ಇಂದಿನ ಮಕ್ಕಳು ಎಲ್ಲಾ ಕ್ರೀಡೆಗಳನ್ನು ಮೊಬೈಲ್ ಫೋನ್ನಲ್ಲೇ ಆಡುತ್ತಾ ಕಾಲಹರಣ ಮಾಡುತ್ತಿರುವುದರಿಂದ, ದೈಹಿಕ ಆರೋಗ್ಯದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಗೀಳಿನಿಂದ ಇಂದಿನ ಯುವಪೀಳಿಗೆಯನ್ನು ಹೊರತಂದು ಆರೋಗ್ಯವಂತ ಸಮಾಜದ ನಿರ್ಮಿಸಲು ಇಂತಹ ಒಳಾಂಗಣ ಕ್ರೀಡಾಂಗಣ ಸಹಕಾರಿಯಾಗಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.