ಕಾಂಗ್ರೆಸ್ಸೇತರ ಶಾಸಕರ ಕ್ಷೇತ್ರಗಳಿಗೆ ಈ ಸರ್ಕಾರ ಅನುದಾನವನ್ನೇ ಕೊಡುತ್ತಿಲ್ಲ
Nov 26 2024, 12:48 AM ISTರಾಜ್ಯದ ಅಭಿವೃದ್ಧಿ ಕೆಲಸವನ್ನು ಸಂಪೂರ್ಣ ಕಡೆಗಣಿಸಿರುವ ಜತೆಗೆ ಬೇರೆ ಪಕ್ಷದ ಶಾಸಕರು ಇರುವ ತಾಲೂಕುಗಳಿಗೆ ಹಣವನ್ನೇ ಕೊಡುತ್ತಿಲ್ಲವೆಂದು ಶಾಸಕ ಎಚ್.ಡಿ. ರೇವಣ್ಣ ದೂರಿದರು. ಇಡೀ ಊರಿಗೆ ಹೊಸದಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ೯೦ ಕೋಟಿ ಬಿಡುಗಡೆ ಮಾಡಿಸಿದ್ದೆ. ಆ ಹಣ ಹಣಕಾಸು ಇಲಾಖೆಯ ಅನುಮೋದನೆಗೆ ಹೋಗಿದ್ದು ಕಾಂಗ್ರೆಸ್ ಸರ್ಕಾರ ಹಣವನ್ನು ತಡೆ ಹಿಡಿದಿದ್ದು, ಅಲ್ಲಿಂದ ಅನುಮೋದನೆ ಆಗಿ ಬಂದಿಲ್ಲ. ಅವರು ಕೊಡದಿದ್ದರೆ ನಾನು ಬಿಡುವುದಿಲ್ಲ. ಹೋರಾಟ ಮಾಡಿಯಾದರೂ ಈ ಹಣ ತರುತ್ತೇನೆ ಎಂದು ಹೇಳಿದರು.