ದೇಶದ ಭವಿಷ್ಯ ಅಡಗಿರುವುದೇ ಸರ್ಕಾರಿ ಶಾಲೆಗಳಲ್ಲಿ
Jun 14 2025, 04:45 AM ISTದೇಶದ ಭವಿಷ್ಯ ಅಡಗಿರುವುದೇ ಸರ್ಕಾರಿ ಶಾಲೆಗಳಲ್ಲಿ, ಏಕೆಂದರೆ ದೇಶದ ಅನ್ನದಾತರೆನಿಸಿದ ಬಹತೇಕ ರೈತರ ಮಕ್ಕಳು ಇಂದಿಗೂ ಓದುತ್ತಿರುವುದು ಸರ್ಕಾರಿ ಶಾಲೆಗಳಲ್ಲಿ. ಇವರ ಅಭ್ಯುದಯವಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಆಲೂರು ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕ ಟಿ.ಕೆ. ನಾಗರಾಜ್ ಅಭಿಪ್ರಾಯಪಟ್ಟರು. ಪ್ರಸಕ್ತ ಕಾಲಮಾನದಲ್ಲಿ ಅತಿಯಾದ ಹಾಗೂ ಅಜಾಗರೂಕತೆಯ ಮೊಬೈಲ್ ಬಳಕೆಯಿಂದ ಮಕ್ಕಳು ಬದುಕಿನಲ್ಲಿ ಪ್ರಬುದ್ಧತೆಯನ್ನು ಸಾಧಿಸುವಲ್ಲಿ ವಿಫಲರಾಗುತ್ತಿದ್ದಾರೆ. ಆದ್ದರಿಂದ ಮೊಬೈಲ್ ಬದಲು ಪುಸ್ತಕಗಳನ್ನು ಹಿಡಿಯಬೇಕು, ಅಂದಾಗ ಮಾತ್ರ ಬದುಕಿನಲ್ಲಿ ಸಾರ್ಥಕತೆ ಕಾಣಲು ಸಾಧ್ಯ ಎಂದರು.