ಗಡಿಯಲ್ಲಿ ಸರ್ಕಾರಿ ಕನ್ನಡ ಶಾಲೆಗಳ ದುಸ್ಥಿತಿ
Jan 31 2025, 12:47 AM ISTಕನ್ನಡಪ್ರಭ ವಾರ್ತೆ ಇಂಡಿ ಪ್ರಾಥಮಿಕ ಶಾಲೆಯ ಕಟ್ಟಡಗಳು ಸುರಕ್ಷಿತವಾಗಿಲ್ಲ. ಶಾಲೆಯಲ್ಲಿ ಕುಳಿತು ಪಾಠ ಕೇಳುವ ಮಕ್ಕಳಿಗೂ ಆತಂಕ ಶುರುವಾಗಿದೆ. ಯಾವಾಗ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಮೈಮೇಲೆ ಬೀಳುತ್ತದೆಯೋ ಎಂಬ ಭಯವಿದೆ. ಯಾಕಂದ್ರೆ, ತಾಲೂಕಿನ ಚಿಕ್ಕಮಣೂರ ಗ್ರಾಮದ ಭೀಮ ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಯಾವುದೇ ಸಂಭವಿಸಿಲ್ಲ. ರಾತ್ರಿ ವೇಳೆ ಘಟನೆ ಸಂಭವಿಸಿದ್ದರಿಂದ ಅಪಾಯ ತಪ್ಪಿದೆ. ಶಾಲಾ ಅವಧಿಯಲ್ಲಿ ಮೇಲ್ಚಾವಣಿ ಕುಸಿದು ವಿದ್ಯಾರ್ಥಿಗಳ ಮೇಲೆ ಬಿದ್ದಿದ್ದರೆ, ಅಪಾಯವಿತ್ತು. ಸುಮಾರು 45 ಅಡಿ ಅಗಲವಾದ ಮೇಲ್ಚಾವಣಿ ರಾತ್ರಿ ವೇಳೆಯಲ್ಲಿ ಬಿದ್ದಿದ್ದರಿಂದ ಅಪಾಯ ತಪ್ಪಿದ್ದು, ಮಕ್ಕಳ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ.