ಸರ್ಕಾರಿ ನೂತನ ಹಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ

Sep 06 2024, 01:10 AM IST
ಸರ್ಕಾರಿ ಶಾಲೆ, ಸಮಗ್ರ ಪ್ರಶಸ್ತಿ, ಆಲೂರು ಸುದ್ದಿ, ಹಾಸನ ಸುದ್ದಿ, ಕ್ರೀಡಾಕೂಟ, ಪ್ರಾಥಮಿಕ ಪಾಠ ಶಾಲೆಗಳ ಕ್ರೀಡಾಕೂಟ,ವಿದ್ಯಾರ್ಥಿಗಳು,Govt School, Comprehensive Award, Aluru News, Hassan News, Sports Event, Primary School Sports Event, Studentsಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಪಾಠ ಶಾಲೆಗಳ ಕ್ರೀಡಾಕೂಟದಲ್ಲಿ ಪಟ್ಟಣದ ಸರ್ಕಾರಿ ನೂತನ ಹಿರಿಯ ಪ್ರಾಥಮಿಕ ಪಾಠಶಾಲಾ ವಿದ್ಯಾರ್ಥಿಗಳು " ಸಮಗ್ರ ಪ್ರಶಸ್ತಿ " ಪಡೆಯುವ ಮೂಲಕ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿ ಖೋ ಖೋ ಪ್ರಥಮ, ಥ್ರೋ ಬಾಲ್ ಪ್ರಥಮ, 100×4 ರಿಲೇ ಪ್ರಥಮ, ವಾಲಿಬಾಲ್ ದ್ವಿತೀಯ ಸೇರಿದಂತೆ ರಿಷಿತ್ ಗೌಡ 400 ಮೀ ದ್ವಿತೀಯ, 100 ಮೀ ತೃತೀಯ, ವಿದ್ಯಾಸಾಗರ್ 600 ಮೀ ದ್ವಿತೀಯ ಸ್ಥಾನ ಪಡೆದಿದ್ದಾರೆ.