ಶಣವಿನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ
Sep 02 2024, 02:08 AM ISTಅರಕಲಗೂಡು ತಾಲೂಕಿನ ಬೈಚನಹಳ್ಳಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕಸಬಾ 2 ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಶಣವಿನಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ ದೊರಕಿತು.ಬಾಲಕಿಯರ ವಿಭಾಗದ ರಿಲೇಯಲ್ಲಿ ಸೃಜನ, ಸಂಜು, ಸ್ವಪ್ನ ಕೀರ್ತನ ಇವರು ತಾಲೂಕು ಹಂತಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕಿಯರ ವಿಭಾಗದ ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ ಹಾಗೂ ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಬಾಲಕರ ವಿಭಾಗದಲ್ಲಿ 200 ಮೀಟರ್ ಓಟದಲ್ಲಿ ಹೇಮಂತ್ ದ್ವಿತೀಯ ಸ್ಥಾನ, 600 ಮೀಟರ್ ಓಟದಲ್ಲಿ ದಿಲೀಪ್ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಬಾಲಕರ ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಆಯ್ಕೆ ಆಗಿರುತ್ತಾರೆ. ಹಾಗೆಯೇ ಥ್ರೋ ಬಾಲ್‌ನಲ್ಲೂ ಸಹ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.