ಕಾಮಿಡಿ ತುಳು ಸಿನಿಮಾ ಮಾಡುವಾಸೆ: ಬಾಲಿವುಡ್ ನಟ ಸುನಿಲ್ ಶೆಟ್ಟಿ
Jan 17 2025, 12:47 AM ISTಮಲಯಾಳಂ, ಬೆಂಗಾಲಿ, ಮರಾಠಿ ಭಾಷೆಗಳ ಸಿನಿಮಾಗಳು ಇಂಟೆಲಿಜೆಂಟ್ ಆಗಿ ಜಗತ್ತಿನ ಗಮನ ಸೆಳೆದಿವೆ. ಇದು ಬಜೆಟ್ನಿಂದ ಸಾಧ್ಯವಾದದ್ದಲ್ಲ. ಬದಲಾಗಿ ಚಿತ್ರದ ವಿಷಯದಿಂದ ಸಾಧ್ಯವಾದದ್ದು. ತುಳು ಭಾಷೆಗೂ ಇಂತಹ ಸಾಮರ್ಥ್ಯ ಇದೆ. ಆದರೆ ತುಳುನಾಡಿನ ಸಮಸ್ಯೆ ಎಂದರೆ, ಇಲ್ಲಿ ಕಲಿತು ಬೇರೆ ಕಡೆ ಕೆಲಸಕ್ಕೆ ತೆರಳುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಹೀಗೇ ಆಗಿದೆ. ಚಿತ್ರದ ಸಬ್ಜೆಕ್ಟ್ ಚೆನ್ನಾಗಿದ್ದರೆ ಗೆದ್ದೇ ಗೆಲ್ಲುತ್ತದೆ ಎಂದು ಸುನಿಲ್ ಶೆಟ್ಟಿ ಹೇಳಿದರು.