• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಅರಣ್ಯ ಭೂಮಿ ಒತ್ತುವರಿ ತೆರವು ವಿರೋಧಿಸಿ ರೈತರ ಪ್ರತಿಭಟನೆ

Aug 21 2024, 12:41 AM IST
ಚನ್ನಮ್ಮನ ಕಿತ್ತೂರು ತಾಲೂಕಿನ ದೇವಗಾಂವ, ಲಿಂಗದಳ್ಳಿ ಬಳಿ ಇರುವ ಅರಣ್ಯ ಭೂಮಿಯ ಒತ್ತುವರಿ ತೆರವಿಗೆ ಬಂದಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

ವರ್ಜಿನ್ ಅರಣ್ಯ ಸಂರಕ್ಷಣೆಯ ಮನವಿಗೆ ರಾಷ್ಟ್ರಪತಿ ಕಾರ್ಯಾಲಯ ಸ್ಪಂದನೆ

Aug 20 2024, 12:47 AM IST
ದೇಶದ ವಿವಿಧೆಡೆ ಇರುವ ವರ್ಜಿನ್ ಅರಣ್ಯ , ಅಲ್ಲಿಯ ವೈವಿಧ್ಯಮಯ ಜೀವರಾಶಿಗಳ ಸಂರಕ್ಷಣೆ ಕುರಿತಂತೆ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಡಾ. ಸದಾನಂದ ಹೆಗ್ಡಾಳಮಠ ರಾಷ್ಟ್ರಪತಿಗೆ ಬರೆದಿದ್ದರು. ಈ ಕುರಿತು ವರದಿ ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.

ನೂರಾರು ಎಕರೆ ಅರಣ್ಯ ಒತ್ತುವರಿ: ಉನ್ನತ ತನಿಖೆಗೆ ಆಗ್ರಹ

Aug 20 2024, 12:46 AM IST
ಕಳೆದೊಂದು ವರ್ಷದಿಂದ ಸುಮಾರು 250 ರಿಂದ 300 ಎಕರೆಯಷ್ಟು ಅರಣ್ಯ ಪ್ರದೇಶ ಒತ್ತುವರಿ ಮಾಡಿ ಅಡಕೆ ತೋಟ ನಿರ್ಮಿಸಲಾಗಿದೆ. ಅಲ್ಲದೆ ಅರಣ್ಯ ಗುಡ್ಡಗಳಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ

ಕಾಡಿನಿಂದ ನಾಡಿಗೆ ಬಂದ ಪುನಗು ಬೆಕ್ಕು: ಅರಣ್ಯ ಇಲಾಖೆ ರಕ್ಷಣೆ

Aug 18 2024, 01:54 AM IST
ಪುನಗು ಬೆಕ್ಕನ್ನು ರಕ್ಷಿಸಿದ್ದೇವೆ. ತೇವಾಂಶವಿರುವ ಜಾಗದಲ್ಲಿ ಈ ಪ್ರಾಣಿ ವಾಸಿಸುತ್ತಿದ್ದು, ಇದು ಮನುಷ್ಯರಿಗೆ ತೊಂದರೆ ಕೊಡುವುದಿಲ್ಲ. ಆಹಾರ ಹುಡುಕಿಕೊಂಡು ಗ್ರಾಮಕ್ಕೆ ಆಗಮಿಸಿರಬಹುದು. ಆರೋಗ್ಯದಲ್ಲಿ ವ್ಯತ್ಯಾಸವಾಗಿ ಮೊದಲಿಗೆ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಹಾಗೂ ಇಲಾಖೆ ಮೇಲಾಧಿಕಾರಿಗಳ ಸಲಹೆ ಮೇರೆಗೆ ಕಾಡಿಗೆ ಬಿಡಲಾಗುವುದು.

ಅರಣ್ಯ ಒತ್ತುವರಿ ತೆರವಿಗೆ ವಿರೋಧ : ಶೃಂಗೇರಿ ಕ್ಷೇತ್ರ ಬಂದ್‌ ಯಶಸ್ವಿ

Aug 18 2024, 01:53 AM IST
ಚಿಕ್ಕಮಗಳೂರು, ಅರಣ್ಯ ಒತ್ತುವರಿ ತೆರವು ಹಾಗೂ ರೈತ ವಿರೋಧಿ ನೀತಿಯನ್ನು ಖಂಡಿಸಿ ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ಶನಿವಾರ ಕರೆ ನೀಡಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಶೃಂಗೇರಿ ವಿಧಾನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎನ್‌.ಆರ್‌.ಪುರ, ಕೊಪ್ಪ ಹಾಗೂ ಶೃಂಗೇರಿ ತಾಲೂಕು ಕೇಂದ್ರಗಳು ಹಾಗೂ ಹೋಬಳಿ ಕೇಂದ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್‌ನಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು.

ಭೀಮಗಡ ವನ್ಯಧಾಮ ಜನರ ಸ್ಥಳಾಂತರ: ಅರಣ್ಯ ಸಚಿವರ ಬಳಿ ನಿಯೋಗ

Aug 17 2024, 12:52 AM IST
ಭೀಮಗಡ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳ ಸ್ಥಳಾಂತರದ ಕುರಿತಾಗಿ ಚರ್ಚಿಸಲು ಶುಕ್ರವಾರ ಪಟ್ಟಣದ ಶಿವಸ್ಮಾರಕ ಸಭಾಗೃಹದಲ್ಲಿ ಶುಕ್ರವಾರ ನಡೆದ ಸರ್ವಪಕ್ಷಗಳ ಮುಖಂಡರ ಮತ್ತು ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಶೀಘ್ರದಲ್ಲೇ ಅರಣ್ಯ ಸಚಿವರ ಬಳಿ ತಾಲೂಕಿನ ಮುಖಂಡರ ನಿಯೋಗ ಕರೆದೊಯ್ಯುಲು ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.

ಕೆ.ತಲಗೂರಿನಲ್ಲಿ 23.20 ಎಕರೆ ಅರಣ್ಯ ಒತ್ತುವರಿ ತೆರವು

Aug 16 2024, 12:49 AM IST
ಕೊಟ್ಟಿಗೆಹಾರ, ಬಾಳೂರು ಹೋಬಳಿ ಗಬ್ಗಲ್ ಸಮೀಪದ ಕೆ.ತಲಗೂರು ಗ್ರಾಮದ ಸ.ನಂ 59 ರಲ್ಲಿ (ಹಳೆ ಸ.ನಂ.48) 23.20 ಎಕರೆ ಅರಣ್ಯ ಒತ್ತುವರಿಯನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಿದರು.

ಕನಕಪುರದ ಅರಣ್ಯ ಇಲಾಖೆ ಕಚೇರಿಗೆ ರೈತರ ಮುತ್ತಿಗೆ

Aug 15 2024, 01:53 AM IST
ಕನಕಪುರ ತಾಲೂಕಿನ ಅರಣ್ಯದಂಚಿನ ಗ್ರಾಮಗಳಲ್ಲಿ ಬಹುಪಾಲು ದಲಿತರು, ಹಿಂದುಳಿದ, ಅಲ್ಪಸಂಖ್ಯಾತರು ಅರಣ್ಯ ಮತ್ತು ಗೋಮಾಳ ಜಮೀನುಗಳಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದು ಇದುವರೆಗೂ ಸಾಗುವಳಿ ಚೀಟಿ ನೀಡದೆ, ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ರೈತ ಸಂಘಟನೆಗಳು ಕನಕಪುರದಲ್ಲಿ ಪ್ರತಿಭಟನೆ ನಡೆಸಿದವು.

ಕಂದಾಯ, ಅರಣ್ಯ ಭೂಮಿ ಗೊಂದಲ ಬಗೆಹರಿದಿಲ್ಲ: ಶಾಸಕ ರಮೇಶ್ ಬಂಡಿಸಿದ್ದೇಗೌಡ

Aug 14 2024, 12:57 AM IST
ಕಂದಾಯ ಮತ್ತು ಅರಣ್ಯ ಇಲಾಖೆಯವರು ತಮ್ಮ ವ್ಯಾಪ್ತಿಗೆ ಸೇರಿದ ಜಮೀನನ್ನು ಗುರುತಿಸಿ ಗಡಿ ನಿಗದಿಪಡಿಸಿಕೊಳ್ಳುವುದಕ್ಕೆ ಮುಂದಾಗಿಲ್ಲ. ಯಾವುದಾದರೊಂದು ಯೋಜನೆಗೆ ಜಮೀನು ನಿಗದಿಪಡಿಸಲು ಹೋದರೆ ಅರಣ್ಯಕ್ಕೆ ಸೇರಿದ ಜಮೀನು, ಇದು ಕಂದಾಯ ಜಮೀನು, ಗೋಮಾಳ ಎಂದೆಲ್ಲಾ ತಗಾದೆ ತೆಗೆಯುತ್ತಾರೆ.

ಅರಣ್ಯ ಇಲಾಖೆ ವಿರುದ್ಧ ಕೇಸ್: ಸುಧಾಕರ್ ಶೆಟ್ಟಿ

Aug 14 2024, 12:51 AM IST
ಕೊಪ್ಪ, ಒತ್ತುವರಿ ತೆರವು ಹೆಸರಿನಲ್ಲಿ ಅರಣ್ಯ ಇಲಾಖೆಯವರು ಮರ, ಗಿಡಗಳನ್ನು ಕಡಿಯುತ್ತಿದ್ದಾರೆ.ಇನ್ನೂ ಮುಂದೆ ಗಿಡ ಕಡಿದರೇ ಇಲಾಖೆ ವಿರುದ್ಧ ಜೆಡಿಎಸ್ ನಿಂದ ಕೇಸ್ ದಾಖಲಿಸಲಾಗುತ್ತದೆ ಎಂದು ಜೆಡಿಎಸ್‌ ಹಿರಿಯ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಹೇಳಿದರು.
  • < previous
  • 1
  • ...
  • 24
  • 25
  • 26
  • 27
  • 28
  • 29
  • 30
  • 31
  • 32
  • ...
  • 47
  • next >

More Trending News

Top Stories
ಪ್ರತಾಪ್‌ಗೆ ಕೋರ್ಟ್‌ನಲ್ಲೇ ಉತ್ತರ ನೀಡುತ್ತೇವೆ: ಸಿಎಂ
ದಸರೆ ಉದ್ಘಾಟನೆ: ಬಾನು ವಿರುದ್ಧ ಪ್ರತಾಪ್‌ ಕೋರ್‍ಟಿಗೆ
3ನೇ ಸಲ ಪಪ್ಪಿ ಆಸ್ತಿಗೆ ಇ.ಡಿ. ರೇಡ್: 2 ಚೀಲದಷ್ಟು ಚಿನ್ನ ಜಪ್ತಿ?
ಚಿನ್ನಯ್ಯ ತಂದ ಬುರುಡೆ ಮೂಲ ಸೌಜನ್ಯಳ ಮಾವ ವಿಠಲಗೌಡ?
ಇಂದು ದೇಶಾದ್ಯಂತ ಖಗ್ರಾಸ ಚಂದ್ರ ಗ್ರಹಣ - ರಾತ್ರಿ 9.57ಕ್ಕೆ ಆರಂಭ, ತಡರಾತ್ರಿ 1.26ಕ್ಕೆ ಮುಕ್ತಾಯ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved